ಯಕ್ಷಗಾನ ಬಯಲಾಟಗಳು ರಾತ್ರಿ ವೇಳೆಯಲ್ಲೇ ನಡೆಯುವುದು. ಹಗಲಿಡೀ ಕಷ್ಟ ಪಟ್ಟು ನಿದ್ದೆ ಮಾಡುವ
ಕಲಾವಿದರು ಯಕ್ಷರಾತ್ರಿಗಳನ್ನು ಬೆಳಗುವುದೆಂದರೆ ಸಾಮಾನ್ಯದ ಕೆಲಸವಲ್ಲ. ಆದರೂ ಯಕ್ಷಗಾನ
ಪ್ರಸಂಗಗಳ ನಡುನಡುವೆ ಹಲವಾರು ವಿಶೇಷ ಪ್ರಸಂಗಗಳು ನಡೆಯುವುದೂ ಇದೆ.
ಹಾಂ! ಇವು ಯಕ್ಷಗಾನ ಪ್ರಸಂಗಗಳಲ್ಲ. ವೀಕ್ಷಕರ ಮನಸ್ಸಿನಲ್ಲಿ ಸಣ್ಣಗೆ ನಗೆ ಮೂಡಿಸುವ, ಕಲಾವಿದರು
ತಮ್ಮ ಜೀವಮಾನವಿಡೀ ಮರೆಯಲಾಗದಂಥ ಪ್ರಸಂಗಗಳು. ಇಂತಹ ಪ್ರಸಂಗಗಳು ಆಗಾಗ
ನಡೆಯುತ್ತಿರುತ್ತವೆ.
ಇಂತಹ ಪ್ರಸಂಗಗಳ ಬೃಹತ್ ಪಟ್ಟಿಯಲ್ಲಿ ಒಂದನ್ನು ಇಂದಿಗೆ ಆರಿಸಿಕೊಂಡಿದ್ದೇವೆ.
ಯಕ್ಷಗಾನದಲ್ಲಿ ಅಭಿನಯಿಸುವುದನ್ನು ಹವ್ಯಾಸವಾಗಿ ಸ್ವೀಕರಿಸಿದ ಯಕ್ಷಗಾನ ಪ್ರಿಯರೋರ್ವರು ಪ್ರಮುಖ
ಕಲಾವಿದರ ಕೂಡುವಿಕೆಯಲ್ಲಿ ಬಯಲಾಟವನ್ನು ಆಡಿಸಲು ನಿರ್ಧರಿಸಿದ್ದರು. ಪ್ರಸಂಗ ರಾಮಾಯಣ
ಒಂದು ಉಪ ಪ್ರಸಂಗವಾದ ಚೂಡಾಮಣಿ.
ಅಂದರೆ, ಸೀತೆಯನ್ನು ರಾವಣ ಅಪಹರಿಸಿರುತ್ತಾನೆ. ಆಕೆಯನ್ನು ಅರಸಿಕೊಂಡು ರಾಮ-ಲಕ್ಷ್ಮಣರು
ಕಾಡಿನಲ್ಲಿ ಅಲೆದಾಡುತ್ತಿದ್ದಾಗ ಸುಗ್ರೀವ ಸಖ್ಯವಾಗುತ್ತದೆ. ಸುಗ್ರೀವನ ವಾನರ ಸೇನೆ ಸೀತೆಯನ್ನು
ಅರಸಲು ಸಜ್ಜಾಗುತ್ತದೆ.
ಈ ಸೇನೆಯಲ್ಲಿ ರಾಮನಿಗೆ ಅಚ್ಚುಮೆಚ್ಚು ಮತ್ತು ಹಿಡಿದ ಕೆಲಸ ಸಾಧಿಸಬಲ್ಲನೆಂಬ ನಂಬಿಕೆ ಇದ್ದಿದ್ದು
ಆಂಜನೇಯನ ಮೇಲೆ. ಆತನಿಗೆ ತನ್ನ ಉಂಗುರ ಕೊಟ್ಟು ಕಳಿಹಿಸುತ್ತಾನೆ. (ಚೂಡಾಮಣಿ ಪ್ರಸಂಗದ
ಬಗ್ಗೆ ಮುಂದಿನ ದಿನಗಳಲ್ಲಿ ಪ್ರಸಂಗದ ಸುತ್ತ ಅಂಕಣದಲ್ಲಿ ವಿವರಿಸಲಾಗುತ್ತದೆ). ಹೀಗೆ ಹೊರಟ
ಆಂಜನೇಯ ಲಂಕೆ ತಲುಪುತ್ತಾನೆ.
ಈಗ ಇರುವುದೇ ಪ್ರಸಂಗದೊಳಗಿನ ವಿಶೇಷ ಪ್ರಸಂಗ. ಲಂಕೆಯಲ್ಲಿ ರಾವಣ ಸೀತೆಯನ್ನು ಅಶೋಕವನದಲ್ಲಿ ಇರಿಸಿರುತ್ತಾನೆ. ಆಂಜನೇಯ ರಾತ್ರಿ ವೇಳೆಯಲ್ಲಿ ಸೀತೆಯನ್ನು ಅರಸುವ ಕಾಯಕದಲ್ಲಿ
ತೊಡಗುವುದರಿಂದ, ಅಶೋಕವನದಲ್ಲಿ ಸೀತೆ ನಿದ್ದೆ ಹೋಗಿರಬೇಕು. ಯಕ್ಷಗಾನದಲ್ಲಿ ಆಗಿದ್ದೂ ಅದೇ.
ಸೀತೆಯ ಪಾತ್ರ ಮಾಡಿದ್ದ ವ್ಯಕ್ತಿ ರಂಗಸ್ಥಳದಲ್ಲೇ ನಿದ್ದೆ ಹೋಗಬೇಕೆ? ಹನುಮ ಮರದ ಮೇಲಿಂದ ಕೆಳಕ್ಕೆ
ಜಿಗಿದರೂ ಸೀತೆಗೆ ಎಚ್ಚರ ಇಲ್ಲ. "ಪರಿಸ್ಥಿತಿ ಕೆಟ್ಟಿತಲ್ಲ" ಎಂದು ಯೋಚಿಸಿದ ಆಂಜನೇಯ "ಅಮ್ಮಾ,
ಸೀತಮ್ಮಾ..." ಎಂದು ಕರೆದ.
ಊಹೂಂ...! ಸೀತೆಗೆ ಎಚ್ಚರವೇ ಇಲ್ಲ. ಕೊನೆಗೆ ಹನುಮ, ಭಾಗವತರು, ಚೆಂಡೆಯವರು ಎಲ್ಲ ಸೇರಿ
ಮಲಗಿದ್ದ ಸೀತೆಯನ್ನು "ರಾಕ್ಷಸರು ಕುಂಭಕರ್ಣನನ್ನು ಎಬ್ಬಿಸಿದಂತೆ" ಎಬ್ಬಿಸಿದರು. ಅಂತೂ
ಪ್ರಸಂಗದೊಳಗಿನ ಪ್ರಸಂಗ ಮುಗಿಯಿತು. ಪ್ರೇಕ್ಷಕರು "ನಿದ್ದೆ ಹೋದ ಸೀತೆ"ಯನ್ನು ನೆನೆಸಿ ನೆನೆಸಿ
ನಕ್ಕರು. ಚೂಡಾಮಣಿ ಪ್ರಸಂಗ ಮುಂದುವರಿಯುತು.
Sunday, April 12, 2009
Wednesday, April 8, 2009
ಲೇಖನಗಳಿಗೆ ಆಹ್ವಾನ
ಆತ್ಮೀಯ ಓದುಗರೆ,
ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆರಂಭವಾದ ಧೀಂಕಿಟ ಬ್ಲಾಗ್, ಯಕ್ಷಗಾನ ಪ್ರಿಯರಿಂದ ಯಕ್ಷಗಾನದ ಬಗೆಗಿನ ಲೇಖನಗಳನ್ನು ಆಹ್ವಾನಿಸುತ್ತಿದೆ. ಅದು ಯಕ್ಷಗಾನದ ಮೇರು ಪ್ರತಿಭೆಗಳ ಬಗ್ಗೆಯೇ ಇರಬಹುದು. ಅಥವಾ ಬೆಳೆಯುತ್ತಿರುವ ಪ್ರತಿಭೆಗಳ ಬಗ್ಗೆ, ಯಕ್ಷಗಾನ ತರಗತಿಗಳನ್ನು ನಡೆಸುತ್ತಿರುವವರು ಅಥವಾ ಯಕ್ಷಗಾನಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳ ಬಗ್ಗೆ ಲೇಖನಗಳನ್ನು ಬರೆಯಬಹುದು. ಯೋಗ್ಯವೆನಿಸಿದ ಲೇಖನಗಳನ್ನು ದೀಂಕಿಟ ಬಳಗ ಪ್ರಕಟಿಸುತ್ತದೆ. ಸಂಪಾದಕರ ತೀಮಾನವೇ ಅಂತಿಮ. ಲೇಕನಗಳನ್ನು ಈ ಮೇಲ್ ಮಾಡಬಹುದು. ಅಥವಾ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.-
ವಿಳಾಸ-ಪ್ರಕಾಶ್ ಪಯಣಿಗಕೇರ್ ಆಫ್ ವೆಂಕಟಸ್ವಾಮಿ ರೆಡ್ಡಿಮನೆ ನಂ- 100/7, 2ನೇ ಮಹಡಿಜಿ ಮುಖ್ಯರಸ್ತೆ, ಜೋಗುಪಾಳ್ಯಹಲಸೂರು, ಬೆಂಗಳೂರು-8

Sunday, April 5, 2009
ಬಲ್ಲಿರೇನಯ್ಯ?: ಯಕ್ಷಗಾನ ಪ್ರಸಂಗ
ಯಕ್ಷಗಾನ ಎಂದರೆ ಹೆಚ್ಚಿನವರಿಗೆ ಗೊತ್ತಿದೆ. ಆದರೂ, ಇದನ್ನು ವ್ಯಾಕ್ಯಾನಿಸುವುದಾದರೆ, ಇದೊಂದು ರೀತಿಯಲ್ಲಿ ನೃತ್ಯ ರೂಪಕ. ಹಾಗಂತ ಬ್ಯಾಲೆ ಅಲ್ಲ. ಏಕೆಂದರೆ, ಯಕ್ಷಗಾನದಲ್ಲಿ ನೃತ್ಯ, ಆಂಗಿಕ, ವಾಚಿಕ ಸೇರಿದಂತೆ ಎಲ್ಲಾ ರೀತಿಯ ಅಭಿನಯಗಳು ಒಳಗೊಂಡಿವೆ. ಪದ್ಯ ರೂಪದ ಪ್ರಸಂಗಗಳನ್ನು ಹಾಡಿ, ನೃತ್ಯ, ಅಭಿನಯಗಳ ಜೊತೆಗೆ ಅದರ ಅಥವನ್ನು ವಿವರಿಸಲಾಗುತ್ತದೆ.
ಯಕ್ಷಗಾನದಲ್ಲಿ ಒಂದು ಪ್ರಸಂಗ ಎಂದರೆ ಒಂದು ಕಥಾನಕ. ಯಕ್ಷಗಾನದ ಆರಂಭದಲ್ಲಿ ಇದ್ದದ್ದು ಕೇವಲ ಪೌರಾಣಿಕ ಪ್ರಸಂಗಗಳು. ಪುರಾಣ, ವೇದ, ಉಪನಿಷತ್ತುಗಳಲ್ಲಿನ ಕಥಾನಕಗಳೇ ಯಕ್ಷಗಾನ ಪ್ರಸಂಗಗಳಾಗಿ ರೂಪು ಪಡೆದಿವೆ. ಪುರಾಣಗಳಲ್ಲಿನ ದೊಡ್ಡ ಕಥೆಯೇ ಒಂದು ಪ್ರಸಂಗವಾಗುತ್ತದೆ. ಆ ಕತೆಯಲ್ಲೇ ಹಲವಾರು ಪ್ರಸಂಗಗಳು ಹೆಣೆಯಲ್ಪಟ್ಟಿದ್ದೂ ಇದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ- ರಾಮಾಯಣ, ಮಹಾಬಾರತ.
ತೆಂಕುತಿಟ್ಟು ಯಕ್ಷಗಾನದಲ್ಲಿ ರಾಮಾಯಣ, ಮಹಾಭಾರತಗಳಿಂದ ಆಯ್ದ ಅಸಂಖ್ಯಾತ ಪ್ರಸಂಗಗಳಿವೆ. ಕೆಲವನ್ನು ಹೆಸರಿಸುವುದಾದರೆ- ರಾಮಾಯಣದಲ್ಲಿ ಸೀತಾ ಸ್ವಯಂವರ, ಪಂಚವಟಿ, ಶೂಪನಖಿ ಗವಭಂಗ, ಸೀತಾಪಹರಣ, ಸುಗ್ರೀವ ಸಖ್ಯ, ಸೀತಾನ್ವೇಷಣೆ, ಲಂಕಾದಹನ, ಚೂಡಾಮಣಿ, ಹನುಮದ್ವಿಲಾಸ, ಇಂದ್ರಜಿತು ಕಾಳಗ, ಮತ್ಸ್ಯವಾನರ, ಮಹಿರಾವಣ ಕಾಳಗ, ರಾವಣ ವಧೆ ಇತ್ಯಾದಿ....
ಇನ್ನು ಮಹಾಭಾರತದಲ್ಲಿ- ಭೀಷ್ಮ ಪ್ರತಿಜ್ಞೆ, ಕುರುಕ್ಷೇತ್ರ, ಅಶ್ವಮೇಧ ಯಾಗ, ದ್ರೌಪದಿ ವಸ್ತ್ರಾಪಹರಣ, ಶ್ರೀಕೃಷ್ಣ ಸಂಧಾನ, ಶಲ್ಯಾವಸಾನ, ಮಹಾರಥಿ ಕರ್ಣ, ವೀರ ಅಭಿಮನ್ಯು, ಬಬ್ರುವಾಹನ ಕಾಳಗ... ಇನ್ನೂ ಹಲವು.
ಇವಿಷ್ಟು ಮಾತ್ರವಲ್ಲದೆ, ದೇವಿಯ ಮಹಾತ್ಮೆ, ಆಕೆಯ ಅವತಾರಗಳು, ವಿಷ್ಣುವಿನ ದಶಾವತಾರ, ಹಲವಾರು ಕ್ಷೇತ್ರಗಳ ಕ್ಷೇತ್ರ ಮಹಾತ್ಮೆಗಳು, ಪ್ರತಿಯೊಬ್ಬ ದೇವ ದೇವತೆಗೆ ಸಂಬಂಧಪಟ್ಟ, ಹಲವಾರು ರಾಜರುಗಳಿಗೆ ಸಂಬಂಧಿಸಿದ ಪ್ರಸಂಗಗಳೂ ಯಕ್ಷಗಾನದಲ್ಲಿವೆ.
(ಪ್ರತಿಯೊಂದು ಪ್ರಸಂಗದ ಬಗೆಗಿನ ಲೇಖನಗಳನ್ನೂ ಧೀಂಕಿಟ ಬಳಗ ಮುಂದಿನ ದಿನಗಳಲ್ಲಿ ಪ್ರಕಟಿಸುತ್ತದೆ.)
ತೀರಾ ಇತ್ತೀಚಿನ ದಿನಗಳಲ್ಲಿ ಸಿನೆಮಾ ಕಥೆಗಲನ್ನು ಪ್ರಸಂಗಗಳಾಗಿ ರೂಪಾಂತರಿಸಿದ್ದೂ ಿದೆ. ಮುಂಗಾರು ಮಳೆ, ಚೆಲುವಿನ ಚಿತ್ತಾರಗಳು ಪ್ರಸಂಗಗಳಾಗಿವೆ. ಆದರೆ, ಅವುಗಳನ್ನು ಯಕ್ಷಗಾನ ಪ್ರೇಮಿಗಳು ಮನಃಪೂವಕವಾಗಿ ಸ್ವೀಕರಿಸಿಲ್ಲ ಎಂಬುದು ವಿಶೇಷ.
ಯಕ್ಷಗಾನದಲ್ಲಿರುವ ಒಂದೊಂದು ಪೌರಾಣಿಕ ಪ್ರಸಂಗಕ್ಕೂ ಅದರದ್ದೇ ಆದ ವಿಶೇಷತೆ, ಹಿನ್ನೆಲೆ ಇದೆ, ಭಾರತೀಯ ಪರಂಪರೆ, ಪುರಾಣಗಳು, ವೇದ-ಉಪನಿಷತ್ತುಗಳ ಆಧಾರವಿದೆ. ಇದನ್ನು ಅಭಿನಯಿಸುವ ಕಲಾವಿದರೂ ಅಷ್ಟೇ ಜ್ಞಾನಿಗಳಾಗಿರಬೇಕಾಗುತ್ತದೆ. ಪುರಾಣ ಜ್ಞಾನ ಇಲ್ಲದವರು ಈ ಕ್ಷೇತ್ರದಲ್ಲಿ ಯಾವ ಸಾಧನೆಯನ್ನೂ ಮಾಡುವುದು ಅಸಾಧ್ಯ. ಯಕ್ಷಗಾನದ ಮೇರು ಶಿಖರವನ್ನು ಏರಿದ ಕಲಾವಿರೆಲ್ಲರೂ ಈ ವಿಷಯದಲ್ಲಿ ಪ್ರವೀಣರೇ ಆಗಿದ್ದಾರೆ ಎಂಬುದನ್ನು ಗಮನಿಸಬೇಕು.

Thursday, April 2, 2009
ಒಡ್ಡೋಲಗಕ್ಕೆ ಸಿದ್ಧತೆ
ಯಕ್ಷಗಾನ ಪ್ರೇಮಿಗಳಿಗೆ,ಧೀಂಕಿಟ ಬಳಗದ ಶುಭಕಾಮನೆಗಳು. ಯಕ್ಷಗಾನಕ್ಕೆ ನಮ್ಮದೇ ಆದ ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ಧೀಂಕಿಟ ಬ್ಲಾಗ್ ಆರಂಭಿಸಿದ್ದೇವೆ. ಕಲಾವಿದರ ಬಗ್ಗೆ, ಸಾದಕರ ಬಗದ್ಗೆ, ಮೇಳಗಳ ಬಗೆಗಿನ ವಿವರಗಳು, ವಿಶೇಷ ಘಟನೆಗಳು, ಪ್ರಸಂಗಗಳು.... ಒಟ್ಟಿನಲ್ಲಿ ಯಕ್ಷಗಾನದ ಸಮಗ್ರ ಮಾಹಿತಿಗಳನ್ನು ನೀಡುವ ಪುಟ್ಟ ಪ್ರಯತ್ಮ ಇಲ್ಲಿದೆ. ಕಲಾರಾಧಕರು ಇದಕ್ಕೆ ಪ್ರೋತ್ಸಾಹ ನೀಡುತ್ತೀರೆಂಬ ವಿಶ್ವಾಸ ನಮ್ಮದು. ಅಂತೆಯೇ ಬ್ಲಾಗ್್ ಓದುಗರು ಕೂಡ ನಿಮಗೆ ತಿಳಿದಿರುವ ವಿಚಾರಗಳು, ಮಾಹಿತಿಗಳ ವಿವರಗಳನ್ನು ಬರೆದು ಕಳುಹಿಸಬಹುದು. ಸಂ-
Subscribe to:
Posts (Atom)