Sunday, April 5, 2009

ಬಲ್ಲಿರೇನಯ್ಯ?: ಯಕ್ಷಗಾನ ಪ್ರಸಂಗ

ಕ್ಷಗಾನ ಎಂದರೆ ಹೆಚ್ಚಿನವರಿಗೆ ಗೊತ್ತಿದೆ. ಆದರೂ, ಇದನ್ನು ವ್ಯಾಕ್ಯಾನಿಸುವುದಾದರೆ, ಇದೊಂದು ರೀತಿಯಲ್ಲಿ ನೃತ್ಯ ರೂಪಕ. ಹಾಗಂತ ಬ್ಯಾಲೆ ಅಲ್ಲ. ಏಕೆಂದರೆ, ಯಕ್ಷಗಾನದಲ್ಲಿ ನೃತ್ಯ, ಆಂಗಿಕ, ವಾಚಿಕ ಸೇರಿದಂತೆ ಎಲ್ಲಾ ರೀತಿಯ ಅಭಿನಯಗಳು ಒಳಗೊಂಡಿವೆ. ಪದ್ಯ ರೂಪದ ಪ್ರಸಂಗಗಳನ್ನು ಹಾಡಿ, ನೃತ್ಯ, ಅಭಿನಯಗಳ ಜೊತೆಗೆ ಅದರ ಅಥವನ್ನು ವಿವರಿಸಲಾಗುತ್ತದೆ.
ಯಕ್ಷಗಾನದಲ್ಲಿ ಒಂದು ಪ್ರಸಂಗ ಎಂದರೆ ಒಂದು ಕಥಾನಕ. ಯಕ್ಷಗಾನದ ಆರಂಭದಲ್ಲಿ ಇದ್ದದ್ದು ಕೇವಲ ಪೌರಾಣಿಕ ಪ್ರಸಂಗಗಳು. ಪುರಾಣ, ವೇದ, ಉಪನಿಷತ್ತುಗಳಲ್ಲಿನ ಕಥಾನಕಗಳೇ ಯಕ್ಷಗಾನ ಪ್ರಸಂಗಗಳಾಗಿ ರೂಪು ಪಡೆದಿವೆ. ಪುರಾಣಗಳಲ್ಲಿನ ದೊಡ್ಡ ಕಥೆಯೇ ಒಂದು ಪ್ರಸಂಗವಾಗುತ್ತದೆ. ಆ ಕತೆಯಲ್ಲೇ ಹಲವಾರು ಪ್ರಸಂಗಗಳು ಹೆಣೆಯಲ್ಪಟ್ಟಿದ್ದೂ ಇದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ- ರಾಮಾಯಣ, ಮಹಾಬಾರತ.
ತೆಂಕುತಿಟ್ಟು ಯಕ್ಷಗಾನದಲ್ಲಿ ರಾಮಾಯಣ, ಮಹಾಭಾರತಗಳಿಂದ ಆಯ್ದ ಅಸಂಖ್ಯಾತ ಪ್ರಸಂಗಗಳಿವೆ. ಕೆಲವನ್ನು ಹೆಸರಿಸುವುದಾದರೆ- ರಾಮಾಯಣದಲ್ಲಿ ಸೀತಾ ಸ್ವಯಂವರ, ಪಂಚವಟಿ, ಶೂಪನಖಿ ಗವಭಂಗ, ಸೀತಾಪಹರಣ, ಸುಗ್ರೀವ ಸಖ್ಯ, ಸೀತಾನ್ವೇಷಣೆ, ಲಂಕಾದಹನ, ಚೂಡಾಮಣಿ, ಹನುಮದ್ವಿಲಾಸ, ಇಂದ್ರಜಿತು ಕಾಳಗ, ಮತ್ಸ್ಯವಾನರ, ಮಹಿರಾವಣ ಕಾಳಗ, ರಾವಣ ವಧೆ ಇತ್ಯಾದಿ....
ಇನ್ನು ಮಹಾಭಾರತದಲ್ಲಿ- ಭೀಷ್ಮ ಪ್ರತಿಜ್ಞೆ, ಕುರುಕ್ಷೇತ್ರ, ಅಶ್ವಮೇಧ ಯಾಗ, ದ್ರೌಪದಿ ವಸ್ತ್ರಾಪಹರಣ, ಶ್ರೀಕೃಷ್ಣ ಸಂಧಾನ, ಶಲ್ಯಾವಸಾನ, ಮಹಾರಥಿ ಕರ್ಣ, ವೀರ ಅಭಿಮನ್ಯು, ಬಬ್ರುವಾಹನ ಕಾಳಗ... ಇನ್ನೂ ಹಲವು.
ಇವಿಷ್ಟು ಮಾತ್ರವಲ್ಲದೆ, ದೇವಿಯ ಮಹಾತ್ಮೆ, ಆಕೆಯ ಅವತಾರಗಳು, ವಿಷ್ಣುವಿನ ದಶಾವತಾರ, ಹಲವಾರು ಕ್ಷೇತ್ರಗಳ ಕ್ಷೇತ್ರ ಮಹಾತ್ಮೆಗಳು, ಪ್ರತಿಯೊಬ್ಬ ದೇವ ದೇವತೆಗೆ ಸಂಬಂಧಪಟ್ಟ, ಹಲವಾರು ರಾಜರುಗಳಿಗೆ ಸಂಬಂಧಿಸಿದ ಪ್ರಸಂಗಗಳೂ ಯಕ್ಷಗಾನದಲ್ಲಿವೆ.
(ಪ್ರತಿಯೊಂದು ಪ್ರಸಂಗದ ಬಗೆಗಿನ ಲೇಖನಗಳನ್ನೂ ಧೀಂಕಿಟ ಬಳಗ ಮುಂದಿನ ದಿನಗಳಲ್ಲಿ ಪ್ರಕಟಿಸುತ್ತದೆ.)
ತೀರಾ ಇತ್ತೀಚಿನ ದಿನಗಳಲ್ಲಿ ಸಿನೆಮಾ ಕಥೆಗಲನ್ನು ಪ್ರಸಂಗಗಳಾಗಿ ರೂಪಾಂತರಿಸಿದ್ದೂ ಿದೆ. ಮುಂಗಾರು ಮಳೆ, ಚೆಲುವಿನ ಚಿತ್ತಾರಗಳು ಪ್ರಸಂಗಗಳಾಗಿವೆ. ಆದರೆ, ಅವುಗಳನ್ನು ಯಕ್ಷಗಾನ ಪ್ರೇಮಿಗಳು ಮನಃಪೂವಕವಾಗಿ ಸ್ವೀಕರಿಸಿಲ್ಲ ಎಂಬುದು ವಿಶೇಷ.
ಯಕ್ಷಗಾನದಲ್ಲಿರುವ ಒಂದೊಂದು ಪೌರಾಣಿಕ ಪ್ರಸಂಗಕ್ಕೂ ಅದರದ್ದೇ ಆದ ವಿಶೇಷತೆ, ಹಿನ್ನೆಲೆ ಇದೆ, ಭಾರತೀಯ ಪರಂಪರೆ, ಪುರಾಣಗಳು, ವೇದ-ಉಪನಿಷತ್ತುಗಳ ಆಧಾರವಿದೆ. ಇದನ್ನು ಅಭಿನಯಿಸುವ ಕಲಾವಿದರೂ ಅಷ್ಟೇ ಜ್ಞಾನಿಗಳಾಗಿರಬೇಕಾಗುತ್ತದೆ. ಪುರಾಣ ಜ್ಞಾನ ಇಲ್ಲದವರು ಈ ಕ್ಷೇತ್ರದಲ್ಲಿ ಯಾವ ಸಾಧನೆಯನ್ನೂ ಮಾಡುವುದು ಅಸಾಧ್ಯ. ಯಕ್ಷಗಾನದ ಮೇರು ಶಿಖರವನ್ನು ಏರಿದ ಕಲಾವಿರೆಲ್ಲರೂ ಈ ವಿಷಯದಲ್ಲಿ ಪ್ರವೀಣರೇ ಆಗಿದ್ದಾರೆ ಎಂಬುದನ್ನು ಗಮನಿಸಬೇಕು.