ಒಬ್ಬ ಸ್ತ್ರೀಪಾತ್ರಧಾರಿಗೆ ಲೇಡಿ ಪೊಲೀಸರ ಭದ್ರತೆ ಕೊಟ್ಟರೆ, ಅವರನ್ನು ತಪಾಸಣೆ ಮಾಡಲು ಲೇಡಿ
ಪೊಲೀಸರೇ ಬಂದರೆ ಹೇಗಾದೀತು?
ತಮಾಷೆಯಲ್ಲ. ಈ ಪ್ರಸಂಗ ನಡೆದದ್ದು, ಪ್ರಸಂಗ ತೆಂಕು-ಬಡಗು ತಿಟ್ಟುಗಳೆರಡರಲ್ಲೂ ಸಮರ್ಥವಾಗಿ
ಪಾತ್ರಪೋಷಣೆ ಮಾಡಿದ ಸೀಮಾತೀತ ಕಲಾವಿದ ಬೇಗಾರು ಶಿವಕುಮಾರ್ ಅವರ ಬದುಕಿನಲ್ಲಿ.
(ಬೇಗಾರು ಅವರ ವೃತ್ತಿ, ಪ್ರವೃತ್ತಿ ಮತ್ತಿತರ ವಿಚಾರಗಳ ಬಗೆಗಿನ ಲೇಖನಗಳನ್ನು ಮುಂದಿನ ದಿನಗಳಲ್ಲಿ
ಪ್ರಕಟಿಸಲಾಗುವುದು.)
1991ರಲ್ಲಿ ನವದೆಹಲಿಯಲ್ಲಿ "ಫೂಲ್ ವಾಲೋಂಕಿ ಫೇರ್" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಸಿದ್ಧ ಸ್ತ್ರೀ ವೇಷಧಾರಿ ಬೇಗಾರು ಶಿವಕುಮಾರ್ ಅವರೂ ಇದರಲ್ಲಿ ಭಾಗವಹಿಸಿದ್ದರು.
ಭಾಗವಹಿಸಿದ್ದ ಎಲ್ಲಾ ಕಲಾವಿದರಿಗೂ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಭದ್ರತಾ ತಪಸಣೆಯಂತೂ
ಇದ್ದದ್ದೇ... ಬೇಗಾರು ಸ್ತ್ರೀವೇಷ ಧರಿಸಿ ಸಮಾರಂಭದ ವೇದಿಕೆತ್ತ ಹೆಜ್ಜೆ ಹಾಕುತ್ತಿದ್ದಂತೆ ಅವರ ಜೊತೆ
ಜೊತೆಗೆ ಲೇಡಿ ಪೊಲೀಸರೂ ಆಗಮಿಸಿದರು. ಬೇಗಾರು ಅವರ ರಕ್ಷಣೆಗೆ. ಬೇಗಾರು ಅವರಿಗೆ ಗೊಂದಲ.
ಇವರೇಕೆ ತಮಗೆ ರಕ್ಷಣೆ ನೀಡುತ್ತಿದ್ದಾರೆ?
ಸಮಾರಂಭದ ವೇದಿಕೆ ಬಳಿ ಬಂದಾಗ ಭದ್ರತಾ ತಪಾಸಣೆಗೂ ಲೇಡಿ ಪೊಲೀಸರೇ ಆಗಮಿಸಿದರು.
ಬೇಗಾರು ಅವರ ಮನದಲ್ಲಿ "ಎಡವಟ್ಟಾಯ್ತಲ್ಲ..." ಎಂಬ ಭಾವ. ತಕ್ಷಣವೇ ಅಲ್ಲಿಗೆ ಬಂದ ಸಮಾರಂಭದ
ಆಯೋಜಕರು "ಯೇ ಔರತ್ ನಹೀ... ಆದಮೀ ಹೈ" ಎಂದಾಗ ಲೇಡಿ ಪೊಲೀಸರಿಗೆ ಅಚ್ಚರಿ.
ಸಮಾರಂಭದಲ್ಲಿ ನೆರೆದವರೆಲ್ಲ ಕಕ್ಕಾಬಿಕ್ಕಿ.
(ಈ ಘಟನೆಯನ್ನು ಸ್ವತಃ ಬೇಗಾರು ಶಿವಕುಮಾರ್ ಅವರೇ ಧೀಂಕಿಟ ಬಳಗದ ಜೊತೆ
ಹಂಚಿಕೊಂಡಿದ್ದಾರೆ. ಯಕ್ಷಗಾನ ಕಲೆಯನ್ನೇ ಉಸಿರಾಗಿಸಿಕೊಂಡ ಬೇಗಾರು ಅವರು ಧೀಂಕಿಟಕ್ಕೆ
ನೀಡುತ್ತಿರುವ ಸಹಕಾರಕ್ಕೆ ನಾವು ಆಭಾರಿ.)
Sunday, June 7, 2009
Subscribe to:
Post Comments (Atom)
1 comment:
ವಂದನೆಗಳು ನಿಮ್ಮಿ ಪಯತ್ನಕ್ಕೆ . ಹಾಗೆ ಇಲ್ಲಿಗೆ ಒಮ್ಮೆ ಮರೆಯದೆ ಹೋಗಿ ww.http://oyakshagana.googlepages.com/audios.htm
Post a Comment