ಅದು ಸಂಜೆ 6 ಗಂಟೆಯ ಸಮಯ. ದೂರದಿಂದ ಚೆಂಡೆಯ ನಿನಾದ ಒಂದೇ ಸಮನೆ ಕಿವಿಗೆ ಅಪ್ಪಳಿಸುತ್ತಿದೆ. ಊರವರು "ಓಹ್! ಆಟ ಶುರುವಾಯ್ತು" ಎಂದು ಚಾಪೆಯನ್ನೋ ಕಂಬಳಿಯನ್ನೋ ಗಂಟು ಕಟ್ಟಿಕೊಂಡು ಪುಟ್ಟ ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಆಟದ ಬಯಲಿನತ್ತ ನಡೆಯತೊಡಗುತ್ತಾರೆ.
ಯಕ್ಷಗಾನದ ಪರಿಭಾಷೆಯಲ್ಲಿ ಇದನ್ನು "ಕೇಳಿ ಬಡಿಯುವುದು" ಎನ್ನುತ್ತಾರೆ. ಯಕ್ಷಗಾನದ ಆದಿಯಲ್ಲಿ ಇಂದಿನಂತೆ ಪ್ರಚಾರದ ಸೌಲಭ್ಯ ಇಲ್ಲವಾಗಿತ್ತಷ್ಟೆ. ಇಂತಿರುವಾಗ ಜನರಿಗೆ ಆಟ ಇದೆ ಎಂಬುದನ್ನು ತಿಳಿಯಪಡಿಸುವುದು ಹೇಗೆ?
ಅದಕ್ಕಾಗಿಯೇ ಆರಂಭವಾದದ್ದು "ಕೇಳಿ ಬಡಿಯುವುದು." ಚೆಂಡೆ ವಾದಕರು ಸರಿಯಾಗಿ 6 ಗಂಟೆಯ ಹೊತ್ತಿಗೆ ಚೆಂಡೆ ಬಡಿಯಲು ಆರಂಭಿಸುತ್ತಾರೆ. ಈ ವಾದನ ಹತ್ತು-ಹದಿನೈದಿ ನಿಮಿಷ ಮುಂದುವರಿಯುತ್ತದೆ. ಚೆಂಡೆಯ ಉರುಳಿಕೆ ಕೇಳಿ ಬರುವ ದಿಕ್ಕಿನತ್ತ ಜನರು ಹೊರಡುವವರೆಗೆ.....
ಇಂದಿನ ಕಾಲದಲ್ಲಿ ಸಾಕಷ್ಟು ಪ್ರಚಾರ ಸೌಲಭ್ಯ ಇರುವುದರಿಂದ ಕೇಳಿ ಬಡಿಯುವ ಅಗತ್ಯ ಇಲ್ಲವಾದರೂ ಸಂಪ್ರದಾಯದಂತೆ ಇಂದಿಗೂ ಮುಂದುವರಿದಿದೆ.
Sunday, September 20, 2009
Subscribe to:
Post Comments (Atom)
1 comment:
ಯಕ್ಷಗಾನದ ಅಭಿಮಾನಿಯಾದ ನಾನಾಗೆ ನಿಮ್ಮ ಬ್ಲಾಗ್ ನಿಜಕ್ಕೂ ಸಂತಸ ತಂದಿದೆ. ಈ ಕನಸು ಪುಟದಲ್ಲಿ ನಿಮ್ಮ ಬ್ಲಾಗ್ ನೋಡಿ ಇತ್ತ ಬಂದೆ. ಇದು ನನ್ನ ಮೊದಲ ಭೇಟಿ!
ನಿಮ್ಮ ಒಳ್ಳೆ ಪ್ರಯತ್ನಕ್ಕೆ ಧನ್ಯವಾದಗಳು.
ಸಾಧ್ಯವಾದಲ್ಲಿ ಲೇಖನಗಳನ್ನು ಬರೆಯಬಹುದೆ?
ದಯವಿಟ್ಟು ಸಂಪರ್ಕಿಸಿ
pravi_star1982@yahoo.co.in
Post a Comment